ಕರ್ನಾಟಕಕ್ಕೆ ಆಮ್ಲಜನಕ ನೀಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರವು

og:image


ಯಾರಿಗಾದರೂ ಕೊರೊನಾ ಸಂಬಂಧಿ ಉಸಿರಾಟದ ತೊಂದರೆ ಆದಾಗ, ಆಸ್ಪತ್ರೆ ದಾಖಲಾಗುವ ವರೆಗಿನ ಸಮಯ ತುಂಬಾ ಮಹತ್ವದ್ದು, ಆ ಸಮಯದಲ್ಲಿ ರೋಗಿಗಳಿಗೆ ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಲು ಬೆಂಗಳೂರಿನ ಸಮಾನ ಮನಸ್ಕರು ಸೇರಿ ಉಸಿರು ಎಂಬ ಯೋಜನೆ ಪ್ರಾರಂಭಿಸಿದ್ದರು. 

ಉಸಿರಾಟದ ತೊಂದರೆ ಆದಾಗ, ರೋಗಿಗಳು ಆಸ್ಪತ್ರೆಗೆ ದಾಖಲಾಗುವ ತನಕ ಆಕ್ಸಿಜನ್ ಕಾನ್ಸಂಟ್ರೇಟರ್ ಯಂತ್ರದ ಮೂಲಕ ಉಚಿತವಾಗಿ ರೋಗಿಗಳ ಮನೆಗೆ ಆಕ್ಸಿಜನ್ ಪೊರೈಕೆ ಮಾಡುವುದು ’ಉಸಿರು’ ತಂಡದ ಉದ್ದೇಶ. ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಈ ಸೇವೆ ಪ್ರಾರಂಭವಾಗಿದೆ. 


ಕೊರೊನಾ ರೋಗದಿಂದ ಉಸಿರಾಟದ ತೊಂದರೆ ಇರುವವರು, ಈ ನಂಬರಿಗೆ ಕಾಲ್ ಮಾಡಿ ಸಹಾಯಯಾಚಿಸಬಹುದು. 
6366177171
9066478030
ದಯವಿಟ್ಟು ಇದನ್ನ ಶೇರ್ ಮಾಡಿ, ಈ ಸೇವೆಯ ಬಗ್ಗೆ ಎಲ್ಲರಿಗೂ ತಿಳಿಯುವಂತೆ ಮಾಡಿ. ಹಾಗೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿರುವ ಈ ಸಹಾಯ ಎಲ್ಲ ಅಭಿಮಾನಿಗಳಿಗೆ ತಿಳಿಯುವಂತೆ ಶೇರ್ ಮಾಡಿ

ಇದೀಗ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಇದರಿಂದ ಉಸಿರು ತಂಡಕ್ಕೆ ಆನೆ ಬಲ ಬಂದಾಂತಾಗಿದೆ ಎಂದು ಕನ್ನಡದ ಪ್ರಖ್ಯಾತ ಕವಿ ’ಕವಿರಾಜ್ ತಮ್ಮ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಇನ್ನು ಈ ಉಸಿರು ಯೋಜನೆಯಲ್ಲಿ, ಕನ್ನಡದ ಕವಿ ಕವಿರಾಜ್ ಜೊತೆ, ಸಾಧು ಕೋಕಿಲ, ಕವಿತಾ ಲಂಕೇಶ್, ದಿನಕರ್ ತೂಗುದೀಪ, ಚೈತನ್ಯ, ಅಕ್ಷತಾ ಎಂ, ಸುಂದರ್, ಸಂಚಾರಿ ವಿಜಯ್, ಡಾ. ಕಿರಣ್ ತೋಟಂಬೈಲ್, ಜ್ನಾನೇಶ್ವರ ಎಂ, ವಿನಯ್ ಪಾಂಡವಪುರ, ಮಾದೇಶ್ ಗೌಡ, ಶೀಕಾಂತ್ ದರ್ಶನ್, ಪವನ್, ಶಕ್ತಿ ಎಂ ಮುಂತಾದವರು ಜೊತೆಗೂಡಿದ್ದಾರೆ. 


ನವೀನ ಹಳೆಯದು