
ದೆಹಲಿ ಮುಖ್ಯಮಂತ್ರಿ ಟ್ವೀಟ್ ಮಾಡಿ, ಸಿಂಗಾಪೂರ ಮೂಲದ ಹೊಸ ಕೊರೊನಾ ತಳಿಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಸಿಂಗಾಪುರ್ ಸರ್ಕಾರವು ಮಕ್ಕಳ ಮೇಲೆ ಪರಿಣಾಮ ಬೀರುವ COVID ವೈರಸ್‌ನ ಹೊಸ ತಳಿ ಪತ್ತೆಯಾಗಿರುವುದನ್ನು ಘೋಷಿಸಿದೆ, ಹೀಗಾಗಿ ಶಾಲೆಗಳನ್ನು ಸ್ಥಗಿತಗೊಳಿಸಿದೆ. ಭಾರತದಲ್ಲಿ ಮೊದಲು ಕಂಡುಬಂದ ಹೊಸ ವೈರಸ್ ರೂಪಾಂತರವು, ಈಗ ಸಿಂಗಾಪೂರಿನಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸರ್ಕಾರ ಎಚ್ಚರಿಕೆ ನೀಡಿತು. ಸಿಂಗಾಪುರದ ಶಿಕ್ಷಣ ಸಚಿವ ಚಾನ್ ಚುನ್ "ರೂಪಾಂತರಗೊಂಡ ವೈರಸ್ ಹೆಚ್ಚು ಅಪಾಯಕಾರಿಯಾಗಿದೆ, ಮತ್ತು ಅವು ಕಿರಿಯ ಮಕ್ಕಳ ಮೇಲೆ ಆಕ್ರಮಣ ಮಾಡುವಂತೆ ತೋರುತ್ತದೆ" ಎಂದು ಹೇಳಿದರು. ದೇಶದಲ್ಲಿ 16 ವರ್ಷದೊಳಗಿನ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಯೋಜನೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಶಿಕ್ಷಣ ಸಚಿವರು ಹೇಳಿದರು.
ಸಿಂಗಾಪುರವು ಸೋಮವಾರ 333 ಕೋವಿಡ್ ಪ್ರಕರಣಗಳನ್ನು ದಾಖಲಿಸಿದ್ದು, ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ. ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಅವರು ಹೊಸ ಸ್ಟ್ರೈನ್ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ಹೇಳಿದರು. "ಇದು ಎಲ್ಲರಿಗೂ ಬಹಳ ಕಷ್ಟದ ಅವಧಿ ಎಂದು ನಮಗೆ ತಿಳಿದಿದೆ. ಇದು COVID ವಿರುದ್ಧದ ನಮ್ಮ ಹೋರಾಟದಲ್ಲಿ ಸ್ಪಷ್ಟವಾಗಿ ಹಿನ್ನಡೆಯಾಗಿದೆ. ಆದರೆ ಸಿಂಗಾಪುರದವರನ್ನು ಸುರಕ್ಷಿತವಾಗಿಡಲು ನಾವು ನಿರ್ಧರಿಸಿದ್ದೇವೆ." ಎಂದು ಹೇಳಿದರು.
ಇನ್ನು ಸಿಂಗಾಪುರದ ಶಿಕ್ಷಣ ಸಚಿವ ಲಾರೆನ್ಸ್ ವಾಂಗ್ ಶ್ಯುನ್ ತ್ಸೈ, ಸಿಂಗಾಪುರವು ತನ್ನ ಎಳೆಯರಿಗೆ ಲಸಿಕೆ ಹಾಕುವ ಯೋಜನೆಯನ್ನು ರೂಪಿಸುತ್ತಿದೆ, ಈವರೆಗೆ ವೈರಸ್‌ಗೆ ತುತ್ತಾದ ಮಕ್ಕಳು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ ಮತ್ತು ಅವರಲ್ಲಿ ಕೆಲವರಿಗೆ ಕರೋನವೈರಸ್‌ನ ಸೌಮ್ಯ ಲಕ್ಷಣಗಳು ಮಾತ್ರ ಇವೆ ಎಂದು ವರದಿಗಳು ತಿಳಿಸಿವೆ.
ಈ ಬಗ್ಗೆ ವಿಡಿಯೋ ನೋಡಿ
ಇದನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ , ಮಂಗಳವಾರ ಆಗ್ನೇಯ ಏಷ್ಯಾದ ದೇಶದೊಂದಿಗೆ ಎಲ್ಲಾ ವಾಯುಯಾನಗಳನ್ನು ಸ್ಥಗಿತಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಿದರು. ಕೇಜ್ರಿವಾಲ್ ಹೊಸ COVID ಸ್ಟ್ರೈನ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ, ಇದು ಸಿಂಗಾಪುರದಲ್ಲಿ ಪತ್ತೆಯಾಗಿದೆ ಮತ್ತು ಮಕ್ಕಳಿಗೆ ಅಪಾಯಕಾರಿ ಎಂದು ಸಾಬೀತಾಗಿದೆ ಎಂದು ಹೇಳಿದರು. ಇದು ಭಾರತದಲ್ಲಿ ಮೂರನೇ ಅಲೆಯಾಗಿ ಬರಬಹುದು ಎಂದು ವಾದಿಸಿದ ಕೇಜ್ರಿವಾಲ್, ಸಿಂಗಾಪುರಕ್ಕೆ ಮತ್ತು ಹೊರಗಿನ ವಿಮಾನಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ಕೇಂದ್ರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
Tags:
World