
ಭಾರತಕ್ಕೆ ಕೊರೊನಾ ಆಘಾತ ಎರಡನೇ ಅಲೆಯ ಮೂಲಕ ಅಪ್ಪಳಿಸಿದ ನಂತರ, ಹಲವಾರು ರಾಜ್ಯಗಳಲ್ಲಿ ಮಿತಿಮೀರಿದ ಕೇಸುಗಳು ಜನರ ಜೀವನ ಅಸ್ತವ್ಯಸ್ತಗೊಳಿಸಿದರೆ, ಇನ್ನು ರಾಜಕೀಯ ಪಕ್ಷಗಳು ಪರಸ್ಪರ ಕೆಸರಾಟ ಮಾಡುತ್ತಾ ಸಮಯಕಳೆಯುತ್ತಿದೆ.
ರಾಜಕಾರಣಿಗಳು ಇರುವುದೇ ರಾಜಕೀಯ ಮಾಡುವುದಕ್ಕೆ ಎನ್ನುವಂತಹ ಪರಿಸ್ಥಿತಿ ಇರುವ ಭಾರತದಲ್ಲಿ, ರಾಜಕೀಯ ಪಕ್ಷಗಳ ಅನುಯಾಯಿಗಳೂ ಪಕ್ಷಗಳ ಮುಂದೆ ತಾವೇನೂ ಕಮ್ಮಿ ಇಲ್ಲ ಎಂದು ರಾಜಕೀಯ ಮಾಡುತ್ತಾ ಸುಳ್ಳುಸುದ್ಧಿ ಹಬ್ಬುತ್ತಾ ಇದ್ದಾರೆ.
ಸುಳ್ಳು ಸುದ್ಧಿ ೧ - ಉಚಿತ 10 ಕೆಜಿ ರೈಸ್, ಇಪ್ಪತ್ತು ಸಾವಿರ ಪ್ಯಾಕೇಜ್
ಇದೊಂದು ನ್ಯೂಸ್ ಪಿನರಾಯಿ ವಿಜಯ್ ಚಿತ್ರದ ಜೊತೆಗೆ ಹಲವಾರು ಜನರ ಫೇಸ್ಬುಕು ಮೂಲಕ ಶೇರ್ ಆಗುತ್ತಿದೆ. ಜನರು ವಿಷಯದ ಸತ್ಯಾಸತ್ಯತೆಯನ್ನು ಪರಿಶೀಲಿಸದೆ, ಶೇರ್ ಮಾಡುವುದುದರ ಮೂಲಕ ಜನರಲ್ಲಿ ಕೇರಳ ಅಂದರೆ ಸ್ವರ್ಗ ಎಂಬ ಭಾವನೆ ಮೂಡಿಸುತ್ತಿದೆ.
ಹಿಂದಿನ ವರ್ಷ ಕೇರಳ ಸರ್ಕಾರ ಇದೇ ಸಮಯಕ್ಕೆ ಪ್ಯಾಕೇಜ್ ಘೋಷಿಸಿದ್ದು, ಅದನ್ನೇ ಈಗಲೂ ಶೇರ್ ಮಾಡುತ್ತಿದ್ದಾರೆ. ಆದರೆ ಈ ಸುದ್ಧಿ ಪ್ರಕಟವಾಗುವ ವರೆಗೂ ಕೇರಳ ಸರ್ಕಾರ ಯಾವುದೇ ಪ್ಯಾಕೇಜ್ ಪ್ರಕಟಿಸಿಲ್ಲ.
ಸುಳ್ಳು ಸುದ್ಧಿ ೨ - ಕೇರಳ ಕೊರೊನಾ ಕೇಸಿನಲ್ಲಿ ಕೊನೆಯ ಸ್ಥಾನ!
ಇಂತಹ ಒಂದು ಅಪ್ಪಟ್ಟ ಸುಳ್ಳು ಇಂದಿಗೆ ಹಲವಾರು ಜನರ ವಾಲ್ಗಳಲ್ಲಿ ಹಂಚಿ ಜನರು ಪಿನರಾಯಿ ಸರ್ಕಾರವನ್ನು ಕೊಂಡಾದಿದ್ದಾರೆ. ಆದರೆ ನಿಜವಾಗಿ ನೋಡಿದರೆ, ಕೇರಳ ಎರಡನೇ ಸ್ಥಾನದಲ್ಲಿದ್ದು, ಕೊರೊನಾ ಯಾವುದೇ ರಾಜ್ಯವನ್ನೂ ಬಿಟ್ಟಿಲ್ಲ. ಇಲ್ಲಿ ಇದು ಕೇರಳ ಸರ್ಕಾರದ ಅಸಮರ್ಥತೆ ಅನ್ನುವುದಕ್ಕಿಂತಲೂ, ಕೊರೊನಾ ಯಾವ ಪಕ್ಷ ಅಧಿಕಾರದಲ್ಲಿದೆ, ಯಾರು ಮುಖ್ಯಮಂತ್ರಿ ಎಂದು ನೋಡೀ ಬರುವುದಿಲ್ಲ ಎನ್ನುವುದನ್ನ ತೋರಿಸುತ್ತದೆ.
ಸುಳ್ಳು ಸುದ್ಧಿ ೩ - ಕೇರಳದಲ್ಲಿ ಆಮ್ಲಜನಕ ಕೊರತೆ ಇಲ್ಲ
ಕರ್ನಾಟಕದಲ್ಲಿ ಆಮ್ಲಜನಕ ಕೊರತೆಯಿಂದ ಜನರು ಸಾಯುತ್ತಿರುವಾಗ, ಹಲವಾರು ಎಡರಂಗದ ಅನುಯಾಯಿಗಳು ಬಿಡುವಿಲ್ಲದೆ ಕೇರಳ ಮಾಡೆಲ್ ಎಂದು ಹೊಗಳಿ ಅಟ್ಟಕೇರಿಸುವ ವರದಿ ಪ್ರಕಟಿಸಿ, ಇನ್ನೇನು ಶೇರ್ ಮಾಡುತ್ತಿರುವಾಗಲೇ, ಕೇರಳದಲ್ಲಿ ಅಮ್ಲಜನಕ ಕೊರತೆ ಮಿತಿಮೀರಿದೆ. ಈಗಾಗಲೇ ಪಿನರಾಯಿ ವಿಜಯನ್ ಪತ್ರಿಕಾಘೋಷ್ಟಿ ಕರೆದು ಇದನ್ನು ಬಹಿರಂಗ ಪಡಿಸಿದ್ದು, ಕೇರಳದಲ್ಲೂ ಆಮ್ಪಜನಕ ಕೊರತೆ ಇರುವುದು ಹೊರಬಿದ್ದಿದೆ.
ಇನ್ನೂ ಇವೆಲ್ಲದರ ನಡುವೆ ಆಶಾಕಿರಣದಂತೆ, ಕೇರಳದಲ್ಲಿ ನಡೆದ ಕೋವಿಡ್ ಲಸಿಕಾ ಅಭಿಯಾನ ಕಾಣಿಸುತ್ತಿದೆ. ಕೇರಳದಲ್ಲಿ ಲಸಿಕಾ ಪ್ರಮಾಣ ಮತ್ತು ಅದರ ನಿರ್ವಹಣೆ ಪ್ರಧಾನಿ ನರೇಂದ್ರ ಮೋದಿಯಿಂದಲೂ ಪ್ರಶಂಸೆಗೆ ಒಳಗಾಗಿದ್ದು ಒಂದು ಉತ್ತಮ ಬೆಳವಣಿಗೆಯಾಗಿದೆ.
ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಜನರಿಗೆ ಉತ್ತಮ ಆರೋಗ್ಯ ಸವಲತ್ತು ನೀಡುವುದು ಅಯಾ ರಾಜ್ಯದ ಮಂತ್ರಿಗಳ ಜವಭ್ದಾರಿ, ಕೇರಳದಲ್ಲಿ ಜನಸಂಖ್ಯೆ ಕಮ್ಮಿಯಿದ್ದು ಸಂಪನ್ಮೂಲದಲ್ಲಿ ಯಾವುದೇ ಕೊರತೆ ಇಲ್ಲ. ಆದರೆ ಕೊರೊನಾ ಅಟ್ಟಹಾಸದ ಮುಂದೆ ಇದೆಲ್ಲಾ ಯಾವುದೂ ಗಣನೆಗೆ ಬರುವುದಿಲ್ಲ.
ಆದರಿಂದ, ರಾಜಕೀಯ ಪಕ್ಶಗಳ ಅಂಧಾಭಿಮಾನಿಗಳಾಗುವ ಬದಲು ಸರ್ಕಾರದಲ್ಲಿರುವ ನ್ಯೂನ್ಯತೆಗಳನ್ನು ಪ್ರಶ್ನಿಸುವ ಕೆಲಸವಾಗಲಿ.