ಫೈಜರ್ ಲಸಿಕೆ ಅನುಮೋದಿಸಿ ಎಂದ ಚೇತನ್ ಭಗತ್-ಗೆ ಫೈಜರ್ ಸೈಡ್ ಎಫೆಕ್ಟ್ಸ್ ಬಗ್ಗೆ ಕ್ಲಾಸ್

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image
ಲೇಖಕ ಚೇತನ್ ಭಗತ್ ಇಂದು ಟ್ವಿಟ್ಟರ್ ಮೂಲಕ ಟ್ವೀಟ್ ಮಾಡಿ "ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಬಳಸಲಾಗುವ ಅತ್ಯುತ್ತಮವಾದ ಫಿಜರ್ ಲಸಿಕೆ ಡಿಸೆಂಬರ್ -2020 ರಲ್ಲಿ ಭಾರತದಲ್ಲಿ ಅನುಮತಿಗಾಗಿ ಅರ್ಜಿ ಸಲ್ಲಿಸಿತು.  ಆದರೆ ಅನುಮತಿ ನೀಡದ ಭಾರತ ಇಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಕೇಳಿಕೊಂಡಿದೆ. ಫೆಬ್ರವರಿ -21 ರಲ್ಲಿ ಫಿಜರ್ ತನ್ನ ಅರ್ಜಿಯನ್ನು ಹಿಂತೆಗೆದುಕೊಂಡಿತು. ಡಿಸೆಂಬರ್‌ನಿಂದಲೇ ನಾವು ಫಿಜರ್ ಲಸಿಕೆಯನ್ನು ಅನುಮತಿಸಿದ್ದರೆ, ಜೀವ ಉಳಿಸಬಹುದಾಗಿತ್ತು" ಎಂದಿದ್ದರು. 

ಆದರೆ ಇದನ್ನು ರಾಜಕೀಯ ಪ್ರೇರಿತ ಟ್ವೀಟ್ ಎಂದು ತರಾಟೆಗೆ ತೆಗೆದುಕೊಂಡ ನೆಟ್ಟಿಗರು, ಹಲವಾರು ವಿಷಯಗಳ ಬಗ್ಗೆ ಚೇತನ್ ಗಮನ ಸೆಳೆದು ಕ್ಲಾಸ್ ತೆಗೆದುಕೊಂಡರು.  ಟ್ವೀಟ್ ಮೂಲಕ ಸರ್ಕಾರದ ನಿರ್ಧಾರ ಸಮರ್ಥಿಸಿರುವ ಹಲವಾರು, ಈ ಕೆಳಗಿನ ವಿವರಗಳನ್ನು ಬರೆದು, ಚೇತನ್ ಫಿಜರ್ ಕಂಪನಿ ಸೇಲ್ಸ್ ಏಜೆಂಟ್ ತರ ಆಡುತ್ತಿದ್ದಾರೆ ಎಂದು ಅರೋಪಿಸಿದರು. 

ನೆಟ್ಟಿಗರ ಪ್ರಕಾರ;

1. ಯಾವುದೇ ಅಡ್ಡಪರಿಣಾಮ ಸಂಬಂಧಿತ ಸಮಸ್ಯೆಯಿಂದ ವಿನಾಯಿತಿ ನೀಡುವ ಷರತ್ತುಗೆ ಭಾರತ ಸಹಿ ಹಾಕಬೇಕೆಂದು ಫಿಜರ್ ಬಯಸಿದ್ದರು.

2. ಭಾರತದ ನಾಗರಿಕರ ಮೇಲೆ ಈ ಲಸಿಕೆಯ ಪರಿಣಾಮಗಳ ಬಗ್ಗೆ ಕಡ್ಡಾಯ ಅಧ್ಯಯನಕ್ಕೆ ಫಿಜರ್ ಸಿದ್ಧರಿರಲಿಲ್ಲ.

3. ಶೇಖರಣಾ ವ್ಯವಸ್ಥೆ ತುಂಬಾ ಜಟಿಲವಾಗಿದ್ದು, ಭಾರತದಲ್ಲಿ ಅದನ್ನು ತಾತ್ಕಾಲಿಕವಾಗಿ ನಿರ್ವಹಿಸಲಾಗುವುದಿಲ್ಲ.

4. ಫಿಜರ್ ಲಸಿಕೆಯ ವೆಚ್ಚವು 3 ಸಮಯ ಹೆಚ್ಚಾಗಿದೆ.

ಈ ಎಲ್ಲ ಬಗ್ಗೆ ನೀವು ಯೋಚಿಸುವುದಿಲ್ಲವಾದರೂ ಭಾರತೀಯ ಸರ್ಕಾರ ಸ್ಪಷ್ಟವಾಗಿ ಭಾರತೀಯರ ಬಗ್ಗೆ ಕಾಳಜಿ ವಹಿಸುತ್ತದೆ ಎಂದು ನೆಟ್ಟಿಗರು, ಚೇತನ್ ಕಾಳೆಲೆದರು. 

English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.