ಸುಶಾಂತ್ ಕೇಸ್ ಸಿಬಿಐಗೆ ವಹಿಸಿ - ಇಲ್ಲವೇ ಉದ್ಧವ್ ಠಾಕ್ರೆ ರಾಜೀನಾಮೆ ಕೊಡಿ

og:image

ಸುಶಾಂತ್ ಆತ್ಮಹತ್ಯೆ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಬಿಹಾರ ಪೋಲಿಸರು ಕೇಸನ್ನು ತನಿಖೆ ಮಾಡಲು ಪ್ರಾರಂಭಿಸಿದ ದಿನದಿಂದ ಮುಂಬಾಯಿ ಪೊಲೀಸರ ಅಸಹಕಾರ ಎದ್ದು ಕಾಣುತ್ತಿದೆ. 

ಇದೇ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೇಸನ್ನು ಸಿಬಿಐ ಗೆ ವಹಿಸಿ ಇಲ್ಲವೇ ರಾಜೀನಾಮೆ ಕೊಡಿ ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಟ್ವಿಟ್ಟರ್ನಲ್ಲಿ  #UddhavResignOrCBI4SSR ಎಂಬ ಹ್ಯಾಸ್ ಟ್ಯಾಗ್ ಇವತ್ತು ಟ್ರೆಂಡ್ ಆಗಿದ್ದು, ಹಲವಾರು ನೆಟ್ಟಿಗರು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ : ರಿಯಾ ಚಕ್ರವರ್ತಿ ವಿರುದ್ಧ ಲುಕ್ ಔಟ್ ನೋಟಿಸ್ - ನಟಿ ನಾಪತ್ತೆ!

ಇದೇ ವೇಳೆ, ಸುಶಾಂತ್ ದೇಹವನ್ನು ಸಾಗಿಸಿದ್ದ ಕೂಪರ್ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಮ್ ಮಾಡಿದ್ದು, ಆ ವಿವರಗಳನ್ನು ಬಿಹಾರ ಪೊಲೀಸರಿಗೆ ಸಲ್ಲಿಸಲು ನಿರಾಕರಿಸಲಾಗಿದೆ ಎಂಬ ವರದಿ ಬಂದಿದ್ದು, ಎಲ್ಲೋ ಅಪರಾಧಿಗಳನ್ನು ರಕ್ಷಿಸಲು ಮಹಾರಾಷ್ಟ್ರ ಸರ್ಕಾರ ಪೊಲೀಸರ ಮೇಲೆ ಒತ್ತಡ ಹೇರುತ್ತಿದೆ ಎಂಬ ಅನುಮಾನ ಉಂಟುಮಾಡಿದೆ. 

ಮುಂಬೈ ಪೊಲೀಸರು 48 ದಿನಗಳಲ್ಲಿ ಒಂದೇ ಎಫ್‌ಐಆರ್ ದಾಖಲಿಸಿಲ್ಲ. ಇತ್ತೀಚಿನ ದಿನಗಳಲ್ಲಿ ಕಂಡುಬರುವ ಪ್ರಕರಣವೊಂದರ ಬಗ್ಗೆ ಇದು ಅತ್ಯಂತ ಅಸಮರ್ಥ ತನಿಖೆಯಾಗಿದೆ ಎಂದು ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ  ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.  

ಇದನ್ನೂ ಓದಿ :


English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ