ರಿಯಾ ಚಕ್ರವರ್ತಿ ಕಾಲ್ ರೆಕಾರ್ಡ್ ಹೇಳುತ್ತೆ ನೂರಾರು ರಹಸ್ಯ ! ಯಾರಿಗೆಲ್ಲಾ ಫೋನ್ ಮಾಡಿದ್ಳು ಗೊತ್ತಾ?

og:image

ರಿಯಾ ಚಕ್ರವರ್ತಿ ಕಾಲ್ ರೆಕಾರ್ಡ್ ಮಾಧ್ಯಮಗಳಿಗೆ ಲೀಕ್ ಆಗಿದ್ದು, ರಿಯಾ ಕಳೆದ ಹಲವಾರು ದಿನಗಳಿಂದ ಮಾಡಿದ್ದಲೆನ್ನಲಾದ ಫೋನ್ ಕರೆಗಳು ಸುಶಾಂತ್ ಕೇಸಿನ ಬಗ್ಗೆ ಹಲವಾರು ರಹಸ್ಯಗಳು ತೆರೆಯುತ್ತಿವೆ. ಇಂದು ಬೆಳಿಗ್ಗೆ ಇ. ಡಿ ಮುಂದೆ ಪ್ರತ್ಯಕ್ಷಳಾದ ರಿಯಾ ಇ. ಡಿ ತನಿಖೆಯನ್ನು ಎದುರಿಸುತ್ತಿದ್ದಾಳೆ. ಇಲ್ಲಿದೆ ಓದಿ : ಕೊನೆಗೂ ಇ.ಡಿ ಮುಂದೆ ಪ್ರತ್ಯಕ್ಷಳಾದ ರಿಯಾ ಚಕ್ರವರ್ತಿ

ಮಂಗಳವಾರ ಮುಂಬೈಗೆ ಆಗಮಿಸಿದ ಬಿಹಾರ ಪೊಲೀಸರ ತಂಡವು ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಸೇರಿದಂತೆ ಇಬ್ಬರು ವ್ಯಕ್ತಿಗಳ ಹೇಳಿಕೆಗಳನ್ನು ಬುಧವಾರ ದಾಖಲಿಸಿದೆ. ಮುಂಬೈ ಪೊಲೀಸರಿಂದ ಸಿಸಿಟಿವಿ ದೃಶ್ಯಾವಳಿಗಳು, ಕರೆ ವಿವರಗಳ ದಾಖಲೆಗಳು, ಸುಶಾಂತ್ ಅವರ ಮೃತದೇಹದ ವಿಡಿಯೋಗ್ರಫಿ ಮತ್ತು ಸಾವಿನ ಸ್ಥಳದ ತುಣುಕನ್ನು ಬಿಹಾರ ಪೊಲೀಸರು ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


ನೇರ ನ್ಯೂಸ್ ಮುಖಾಂತರ ಇಂತಹ ಹಲವಾರು ಸುದ್ಧಿಗಳು ಪ್ರತಿದಿನ ಪೋಸ್ಟ್ ಮಾಡಲಾಗುತ್ತಿದ್ದು, ಇದನ್ನು ನೀವು ಪಡೆಯಲು ನಮ್ಮ ಫೇಸ್ ಬುಕ್ ಪೇಜ್ ಈ ಕೂಡಲೇ ಲೈಕ್ ಮಾಡಿ.

ಇನ್ನು ಫೋನ್ ಡೀಟೇಲ್ಸ್ ಹಲವಾರು ರಹಸ್ಯಗಳನ್ನು ಬಿಚ್ಚಿಟ್ಟಿದ್ದು, ತನ್ನ ಮಾಜಿ ಮ್ಯಾನೇಜರ್ ಶ್ರುತಿ ಮೋದಿ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಅವರಿಂದ ಹೆಚ್ಚಿನ ಕರೆಗಳು ಬಂದಿವೆ ಎಂದು ಕರೆ ವಿವರಗಳು ಬಹಿರಂಗಪಡಿಸುತ್ತವೆ. ಶ್ರುತಿ ಮೋದಿ, ಸುಶಾಂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದು, ಅವರಿಗೆ ರಿಯಾ 800 ಕ್ಕಿಂತಲೂ ಅಧಿಕ ಭಾರಿ ಕಾಲ್ ಮಾಡಿದ್ದಳು. ಮಹೇಹ್ ಭಟ್ ಅವರಿಗೂ ಹದಿನಾರು ಕಾಲ್ ಮಾಡಿದ್ದು, ಮಹೇಹ್ ಭಟ್ ಅವರೂ ಈ ಕೇಸಿನಲ್ಲಿ ಸಿಲುಕಿಹಾಕುವ ಸಾಧ್ಯತೆ ಇದೆ. ಇನ್ನು ಸುಶಾಂತ್ ಕೇಸ್ ತನಿಖೆಗೆ ಬಂದಿದ್ದ ಬಿಹಾರ ಟಾಪ್ ಪೊಲೀಸ್ ಮುಂಬೈಯಲ್ಲಿ ಬಿಡುಗಡೆ ಮಾಡಿದ್ದು ಇದರ ಬಗ್ಗೆ ಇಲ್ಲಿ ಓದಿ : ಸುಶಾಂತ್ ಕೇಸ್ ತನಿಖೆಗೆ ಬಂದಿದ್ದ ಬಿಹಾರ ಟಾಪ್ ಪೊಲೀಸ್ ಮುಂಬೈಯಲ್ಲಿ ಬಿಡುಗಡೆ

ರಿಯಾ ಚಕ್ರವರ್ತಿ ತಂದೆಗೆ 1,112 ಮತ್ತು ಸಹೋದರನಿಗೆ 886 ಕರೆಗಳನ್ನು ಮಾಡಿದ್ದಾರೆ ಎಂದು ವರದಿಯಾಗಿದೆ. ರಿಯಾ ಚಕ್ರವರ್ತಿ ಅವರ ಬ್ಯಾಂಕ್ ಖಾತೆಯಿಂದ 15 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ ಎಂದು ಸುಶಾಂತ್ ಅವರ ಕುಟುಂಬ ಆರೋಪಿಸಿದೆ. ಜಾರಿ ನಿರ್ದೇಶನಾಲಯವು ಈಗ ರಿಯಾ ಚಕ್ರವರ್ತಿಯ ಮಾಜಿ ವ್ಯವಸ್ಥಾಪಕ ಶ್ರುತಿ ಮೋದಿಯನ್ನು ತನಿಖೆಗೆ ಕರೆದಿದೆ. 

ಇನ್ನು, ರಿಯಾ ಮುಂಬಾಯಿ ಪೊಲೀಸರೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿದ್ದಿದ್ದು, ಈ ಕಾಲ್ ರೆಕಾರ್ಡ್ ಮೂಲಕ ಹೊರಬಿದ್ದಿದ್ದು, ಇದೊಂದು ಮಹತ್ವದ ಸಾಕ್ಷಿಯಾಗುವ ಎಲ್ಲಾ ಲಕ್ಷಣಗಳಿವೆ. ಎರಡು ಬಾರಿ ಒಳಕರೆ ಮತ್ತು ಎರಡು ಬಾರಿ ಹೊರಕರೆ ರಿಯಾ ಫೋನ್ ಇಂದ ಮುಂಬಾಯಿಯ ಪ್ರಮುಖ ಪೊಲೀಸ್ ಅಧಿಕಾರಿಗೆ ಮಾಡಿದ್ದಾರೆ. 

ಇನ್ನೊಂದು ಮಹತ್ತ್ವರ ಬೆಳವಣಿಗೆಯಲ್ಲಿ, ಸುಶಾಂತ್ ಸಿಂಗ್ ರಜಪೂತ್ ಅವರ ಡೈರಿಯಲ್ಲಿ ಹಲವಾರು  ಪುಟಗಳು ಕಾಣೆಯಾಗಿದ್ದು ಪತ್ತೆಯಾಗಿದೆ. ಕೊನೆಯ ಪುಟಗಳು ಯಾರೋ ಹರಿದಿದ್ದು, ಇದರಲ್ಲಿ ಮಹತ್ವದ ವಿಚಾರಗಳಿವೆ ಎನ್ನಲಾಗಿದೆ. 

ಇದನ್ನೂ ಓದಿ :


English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ