'ರಾಧಾ ಕೃಷ್ಣ' ಸೀರಿಯಲ್ ರಾಧೆಯ ನಿಜ ಜೀವನದ ಕಥೆ ಗೊತ್ತಾ ? ಇಲ್ಲಿದೆ ಓದಿ !

og:image

ಸ್ವಸ್ತಿಕ್ ಪ್ರೊಡಕ್ಷನ್ಸ್ನ 'ರಾಧಾಕೃಷ್ಣ' ಸಣ್ಣ ಪರದೆಯಲ್ಲಿ ಅತ್ಯಂತ ಜನಪ್ರಿಯ ಪೌರಾಣಿಕ ಧಾರವಾಹಿಯಾಗಿತ್ತು. ಅಕ್ಟೋಬರ್ 2018 ರಲ್ಲಿ ಸ್ಟಾರ್ ಭಾರತ್ ಚಾನೆಲ್ನಲ್ಲಿ ಪ್ರಾರಂಭವಾದ  ಪ್ರದರ್ಶನವು ಚಾನಲ್‌ಗೆ ಉತ್ತಮ್ಮ ಟಿಅರ್ಪಿ ತಂದು ಕೊಟ್ಟಿತ್ತು. 'ರಾಧಾಕೃಷ್ಣ' ಕೃಷ್ಣ-ರಾಧೆಯ ಅಮರ ಮಧುರ ಪ್ರೇಮಕಥೆಯಾಗಿದೆ.  ಇಂದಿನ ಯುವಜನತೆ ಈ ಧಾರಾವಾಹಿಯನ್ನು ಮೆಚ್ಚಿಕೊಂಡಿದೆ. ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಈ ಧಾರಾವಾಹಿಗೆ ಸಂಬಂಧಪಟ್ಟ ಫೋಟೋಗಳು ವೈರಲ್ ಆಗುತ್ತಿವೆ.

ಸುಮೇದ್ ಮುದ್ಗಾಲ್ಕರ್ ಮತ್ತು ಮಲ್ಲಿಕಾ ಸಿಂಗ್ ಕ್ರಮವಾಗಿ 'ಕೃಷ್ಣನ್' ಮತ್ತು 'ರಾಧಾ' ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಧಾರವಾಹಿ ಕನ್ನಡದಲ್ಲೂ ಮೇ 18ರಿಂದ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ರಾಧಾ ಕೃಷ್ಣ' ಧಾರಾವಾಹಿ ಪ್ರಸಾರವಾಗುತ್ತಿದೆ.

ಅಂದ ಹಾಗೆ ಹಲವಾರು ವೀಕ್ಷಕರು ರಾಧೆಯ ಮುಗ್ಧತೆಗೆ ಮಾರು ಹೋಗಿದ್ದು, ಅವರ ಕುರಿತು ಗೋಗಲ್ನಲ್ಲಿ ಸರ್ಚ್ ಮಾಡಿದ್ದಾರೆ.

ಮುಗ್ದ ಮುಖದ ರಾಧೆಯಾಗಿ ಬಣ್ಣಹಚ್ಚಿದ್ದು ಕಾಶ್ಮೀರದ ಕುವರಿ ಮಲ್ಲಿಕಾ ಸಿಂಗ್. ಅಂದ ಹಾಗೆ ಮಲ್ಲಿಕಾಳಿಗೆ ಸೀರಿಯಲ್ ಜಗತ್ತು ಪ್ರಾರಂಭವಾಗಿದ್ದೇ ರಾಧಾಕೃಷ್ಣ ಧಾರಾವಹಿಯ ಮೂಲಕ. ಇದು ಆಕೆಯ ಮೊದಲ ಧಾರಾವಾಹಿ.

ಮೂಲತಃ ಕಾಶ್ಮೀರದ ಈ ಚೆಲುವೆ, 10ನೇ ತರಗತಿ ಓದುತ್ತಿರುವಾಗಲೆ ರಾಧಾಕೃಷ್ಣ ಧಾರಾವಾಹಿಗೆ ಆಡಿಷನ್ ನೀಡಿದ್ದಾರೆ. ಆಡಿಷನ್ ನೀಡಿ ಎರಡುವರೆ ವರ್ಷದ ನಂತರ ಈ ಧಾರಾವಾಹಿ ಪ್ರಾರಂಭವಾಗಿದೆ. ಧಾರಾವಾಹಿ ಮಾಡುವಾಗ ಮಲ್ಲಿಕಾಗೆ ಇನ್ನೂ 18 ವರ್ಷ. ಈಗ ಧಾರಾವಾಹಿಗಾಗಿಯೆ ವಾಸಸ್ಥಾನ ಬದಲಿಸಿರುವ ಮಲ್ಲಿಕಾ, ಕಾಶ್ಮೀರದಿಂದ ಮುಂಬೈಗೆ ಬಂದು ನೆಲೆಸಿದ್ದಾರೆ.  ಅಂದರೆ 2018ರಲ್ಲಿ ರಾಧಾಕೃಷ್ಣ ಧಾರಾವಾಹಿ ಪ್ರಾರಂಭವಾಗಿದೆ, ಇತ್ತೀಚೆಗಷ್ಟೇ ಕನ್ನಡದಲ್ಲಿ ಪ್ರಸಾರಗೊಳ್ಳಲು ಪ್ರಾರಂಭವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಟ್ ಆಗಿರುವ ಮಲ್ಲಿಕಾ ಸಿಂಗ್ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರಾಧೆಯಾಗಿ ಯುವಕರ ಮನದಲ್ಲಿ ಜಾಗಪಡೆದಿರುವ ಮುಗ್ಧ ಮಲ್ಲಿಕಾ ಅವರ ಫೋಟೋಗಳು ಮಾತ್ರ ಅಭಿಮಾನಿಗಳನ್ನು ಅಚ್ಚರಿ ಪಡುವಂತೆ ಮಾಡುತ್ತಿವೆ. ಫೋಟೊಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ  ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.  

ಇದನ್ನೂ ಓದಿ :


English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ