ಸಿಎಎ ಪ್ರತಿಭಟನೆಯಲ್ಲಿ ಭಾಗವಹಿಸಲು ಪಾಕಿಸ್ತಾನಿಯಿಂದ 5 ಕೋಟಿ ಪಡೆದ ದೀಪಿಕಾ ಪಡುಕೋಣೆ - ಆರೋಪ

og:image

ಗುವಾಹಟಿ: ಮಾಜಿ ರಾ ಅಧಿಕಾರಿ ಎನ್ ಕೆ ಸೂದ್ ಅವರ ಪ್ರಕಾರ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಸಂಬಂಧ ಹೊಂದಿರುವ ವ್ಯಕ್ತಿಯಿಂದ 5 ಕೋಟಿ ರೂ. ಪಡೆದಿದ್ದಾರೆ ಎಂದು ಆಪಾದಿಸಿದ್ದಾರೆ. 

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆಂದು ಹೇಳಲಾಗುವ ಪ್ರಮುಖ ಉದ್ಯಮಿ ಅನೀಲ್ ಮುಸರತ್ ಅವರಿಂದ 5 ಕೋಟಿ ರೂ. ಪಡುಕೋಣೆಯವರಿಗೆ ಸಂದಾಯವಾಗಿದ್ದು, ಜಾರಿ ನಿರ್ದೇಶನಾಲಯ (ಇಡಿ) ಈಗಾಗಲೇ ಈ ಬಗ್ಗೆ ತನಿಖೆ ಆರಂಭಿಸಿದೆ ಎಂದು ಸೂದ್ ಹೇಳಿದ್ದಾರೆ. ಮಾಜಿ ರಾ ಅಧಿಕಾರಿಯಾಗಿರುಚ ಸೂದ್, ಬಾಲಿವುಡ್, ಪಾಕಿಸ್ತಾನದ ಐಎಸ್ಐ ಮತ್ತು ಕ್ರಿಮಿನಲ್ ಭೂಗತ ಜಗತ್ತಿನ ನಡುವಿನ ಸಂಬಂಧದ ಬಗ್ಗೆ ಅನೇಕವೇಳೆ ಧ್ವನಿ ಎತ್ತಿದ್ದಾರೆ.

ಚಲನಚಿತ್ರೋದ್ಯಮ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಹಾರಾಷ್ಟ್ರ ಸರ್ಕಾರವನ್ನು ಸಂಪರ್ಕಿಸಬಹುದು ಎಂದು ವರದಿಗಳು ತಿಳಿಸಿವೆ. ಅಖಿಲ ಭಾರತೀಯ ಯುವ ಪರಿಷತ್ (ಎಬಿವಿಪಿ) ಅಂಗಸಂಸ್ಥೆ ಜೆಎನ್‌ಎಸ್‌ಯು ಅಧ್ಯಕ್ಷ ಆಯಿಷೆ ಘೋಷ್ ಸೇರಿದಂತೆ ಕೆಲವು ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ವಿರುದ್ದ ಪ್ರತಿಭಟಣೆಗಳು ನಡೆಯುತ್ತಿರುವಾಗ, ದೀಪಿಕಾ ಪಡುಕೋಣೆ ಕ್ಯಾಂಪಸ್‌ಗೆ ಭೇಟಿ ನೀಡಿ ಸದ್ದಿಲ್ಲದೆ ವಿದ್ಯಾರ್ಥಿಗಳೊಂದಿಗೆ ನಿಂತು, ಕೈಗಳನ್ನು ಮಡಚಿ ನಿಂತಿದ್ದರು. ವಿಶೇಷವೆಂದರೆ, ದೀಪಿಕಾ ತನ್ನ ಭೇಟಿಯ ಸಮಯದಲ್ಲಿ ಒಂದೇ ಒಂದು ಮಾತನ್ನೂ ಹೇಳಲಿಲ್ಲ. ಆಸಿಡ್ ದಾಳಿಯಿಂದ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಅವರ ಜೀವನವನ್ನು ಆಧರಿಸಿದ 'ಚಾಪಕ್' ಚಿತ್ರ ಬಿಡುಗಡೆಯಾಗುವ ಕೆಲವೇ ದಿನಗಳ ಮೊದಲು ದೀಪಿಕಾ ಭೇಟಿ ಮಾಡಿದ್ದು ಭಾರತದಾದ್ಯಂತ ಭಾರಿ ಸುದ್ಧಿ ಮಾಡಿತ್ತು. 

ಚಿತ್ರದ ಬಿಡುಗಡೆಯ ಮುಂಚೆಯೇ ಅವರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದು ಅವರ ಅಭಿಮಾನಿಗಳನ್ನು ಮೆಚ್ಚಿಸಲು "ಪ್ರಚಾರದ ಸಾಹಸ" ಎಂದು ನಟರ ವಿರೋಧಿಗಳು ಹೇಳಿದ್ದರು. ಮತ್ತೊಂದೆಡೆ, ಅವರ ಬೆಂಬಲಿಗರು ಹಲ್ಲೆಗೊಳಗಾದ ಜೆಎನ್‌ಯು ವಿದ್ಯಾರ್ಥಿಗಳೊಂದಿಗೆ ಐಕಮತ್ಯದಲ್ಲಿ ನಿಲ್ಲಲು ದೀಪಿಕಾಗೆ "ಎಲ್ಲ ಹಕ್ಕಿದೆ" ಎಂದು ಹೇಳಿದ್ದರು.


'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ  ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.  

ಇದನ್ನೂ ಓದಿ :


English Summary: । NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ