`ಗಟ್ಟಿಮೇಳ' ಸೀರಿಯಲ್ ಆದ್ಯ - ಅನ್ವಿತಾ ಸಾಗರ್ ಸೂಪರ್ ವಿಡಿಯೋ ನೋಡಿ- ಶೇರ್ ಮಾಡಿ

og:image

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿಗಳಾದ ಜೊತೆಜೊತೆಯಲಿ ಮತ್ತು ಗಟ್ಟಿಮೇಳ ನಂಬರ್ ಒನ್ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಆದರೆ  'ಗಟ್ಟಿಮೇಳ' ಮೊದಲ ದಿನದಂದಲೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಇನ್ನು ಗಟ್ಟಿಮೇಳದಲ್ಲಿ ಆದ್ಯಾ ಪಾತ್ರ ಮಾಡುತ್ತಿರುವ ನಟಿ,  ಅನ್ವಿತಾ ಸಾಗರ್ ಕೂಡಾ ಎಲ್ಲರ ಮನ ಗೆದ್ದಿದ್ದು, ಅವರು ಈಗಾಗಲೇ ಕನ್ನಡಲ್ಲಿ ಮತ್ತು ತುಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ತುಳು ಚಿತ್ರಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿರುವ ಅನ್ವಿತಾ ಇತ್ತೀಚೆಗೆ ಕನ್ನಡ ಚಿತ್ರದಲ್ಲೂ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. 

'ಮಾಯಾ ಕನ್ನಡಿ' ಚಿತ್ರದಲ್ಲಿ ಅನ್ವಿತಾ ಸಾಗರ್, ಕಾಲೇಜ್ ಕೌನ್ಸಿಲರ್ ಆಗಿ ನಟಿಸಿ ಎಲ್ಲರ ಮನಗೆದ್ದಿದ್ದಾರೆ. ಪ್ರಭು ಮುಂಡ್ಕೂರು ನಾಯಕ ನಟನಾಗಿ ನಟಿಸಿರುವ ಮಾಯಾ ಕನ್ನಡಿ ಕಾಲೇಜಿನಲ್ಲಿ ನಡೆಯುವ ಬ್ಲೂವೇಲ್ ಗೇಮ್ ಮರ್ಡರ್ ಮೇಲೆ ಚಿತ್ರಿತವಾಗಿದೆ.

 


ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದರೂ, ಆಗಷ್ಟೇ ಭಾರತಕ್ಕೆ ವಕ್ಕರಿಸಿದ ಕೊರೊನಾ ಹೊಡೆತಕ್ಕೆ ಸಿಕ್ಕು ಚಿತ್ರ ಹೆಚ್ಚು ದಿನ ಚಿತ್ರಮಂದಿರಗಳಲ್ಲಿ ಉಳಿದಿರಲಿಲ್ಲ. ಆದರೆ ಈಗಾಗಲೇ ಎಲ್ಲಾ ಕನ್ನಡ ಚಿತ್ರಗಳೂ ಅಮೇಜಾನ್ ಪ್ರೈಮ್ ಮೂಲಕ ಬರುತ್ತಿದ್ದು, ಮಾಯಾ ಕನ್ನಡಿ ಚಿತ್ರ ಕೂಡಾ ಆದಷ್ಟೂ ಬೇಗ ರಿಲೀಸ್ ಆಗುವ ಸಾಧ್ಯತೆ ಇದೆ. 


ಹೀಗಿರುವಾಗ ಅನ್ವಿತಾ ಸಾಗರ್ ನಟಿಸಿರುವ ಡ್ಯಾನ್ಸ್ ವಿಡಿಯೋ ಸಖತ್ ಸೌಂಡ್ ಮಾಡ್ತಾ ಇದೆ. ಹಿಂದಿ ಹಾಡಿಗೆ ಕುಣಿದಿರುವ ಅನ್ವಿತಾ ಡ್ಯಾನ್ಸ್ ನೋಡಿ ಅಭಿಮಾನಿಗಳು ಈಗಾಗಲೇ ಇಷ್ಟ ಪಟ್ಟು ಶೇರ್ ಮಾಡಿದ್ದಾರೆ. ಈ ಡ್ಯಾನ್ಸ್ ಇಲ್ಲಿದೆ ನೋಡಿ.. ದಯವಿಟ್ಟು ಶೇರ್ ಮಾಡಿ. 


English Summary: gatti mele serial Kannada anvitha sagar maya kannadi Kannada movie release dance video maya kannadi on ott। NeraNews.com is a leading daily news website, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

'ನೇರ ನ್ಯೂಸ್' ನಿಮಗೆ ಆಪ್ತವೇ? ನಮ್ಮ ಸುದ್ಧಿಗಳು ಎಲ್ಲರಿಗೂ  ತಲುಪಬೇಕೆಂದು ಬಯಸುವಿರಾ? ಹಾಗಾದರೇ ಈಗಲೇ ಇಲ್ಲಿರುವ ಶೇರ್ ಬಟನ್ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹಿಸಿ.  

ಕಾಮೆಂಟ್‌ಗಳಿಲ್ಲ