
ನವದೆಹಲಿ: ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿನ ಕರೋನವೈರಸ್ ಪರಿಸ್ಥಿತಿಯ ನಿರ್ವಹಣೆ ಕುರಿತು ಚರ್ಚಿಸಲು ಸೇರಿದ್ದ ಸರ್ವಪಕ್ಷ ಸಭೆಯ ನಂತರ, ದೆಹಲಿಯಲ್ಲಿ ಎಲ್ಲರಿಗೂ ಕರೋನವೈರಸ್ ಪರೀಕ್ಷೆ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಭರವಸೆ ನೀಡಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶದ ಕೆಲವು ಭಾಗಗಳು ಮತ್ತು ಹರಿಯಾಣದ ಕೆಲವು ಭಾಗಗಳು ದೆಹಲಿಯ ಮಾದರಿಯಲ್ಲಿ ಕೊರೊನ ಪರೀಕ್ಷೆಗೆ ಒಳಗಾಗಲಿದೆ. ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ರಾಷ್ಟ್ರ ರಾಜಧಾನಿಯ COVID-19 ಯುದ್ಧದಲ್ಲಿ ಕೈಜೋಡಿಸಬೇಕು ಎಂದು ಶ್ರೀ ಶಾ ಹೇಳಿದರು.
COVID-19 ಸನ್ನದ್ಧತೆಯನ್ನು ಪರಿಶೀಲಿಸಲು ಅಮಿತ್ ಶಾ ನಂತರ ದೆಹಲಿಯ ಲೋಕ ನಾಯಕ ಜೈ ಪ್ರಕಾಶ್ (ಎಲ್ಎನ್ಜೆಪಿ) ಆಸ್ಪತ್ರೆಗೆ ಅಚ್ಚರಿಯ ಭೇಟಿ ನೀಡಿದರು. ರೋಗಿಗಳ ಸರಿಯಾದ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಆಸ್ಪತ್ರೆಗಳ ಕರೋನವೈರಸ್ ವಾರ್ಡ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಗೃಹ ಸಚಿವರು ದೆಹಲಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದರು.
ಅಮಿತ್ ಶಾರ ಈ ಅಚ್ಚರಿಯ ಭೇಟಿಯಿಂದ ಖುಷಿಗೊಂಡ ದೆಹಲಿಯ ವೈದ್ಯರು ಮತ್ತು ನರ್ಸ್ ತಮ್ಮ ಸಂತಸವನ್ನು ಹಂಚಿಕೊಂಡರು. ಟ್ವಿಟ್ಟರ್ನಲ್ಲಿ #ThankYouAmitShah ಎಂಬ ಹ್ಯಾಸ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಕೊನೆಗೂ ದೆಹಲಿ ಅಮಿತ್ ಶಾವರ ಉತ್ತಮ ಆಡಳಿತ ಅನುಭವದೊಂದಿಗೆ, ಶೀಘ್ರವಾಗಿ ಕೊರೊನ ಮಹಾ ಮಾರಿಯ ಹೊಡೆತದಿಂದ ಹೊರಬರಲಿದೆ ಎಂದು ಟ್ವೀಟ್ ಮಾಡಿದ್ದಾರೆ.