ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭಯೋತ್ಪಾದನೆ ಮತ್ತು ತೀವ್ರಗಾಮಿತ್ವಗಳ ವಿರುದ್ಧದ ಹೋರಾಟ ಯಾವುದೇ ಧರ್ಮಕ್ಕೆ ವಿರುದ್ಧವಾಗಿಲ್ಲ, ಆದರೆ ಯುವಕರನ್ನು ತಪ್ಪು ದಾರಿ ತಪ್ಪಿಸುವ ಮನಸ್ಸುಗಳ ವಿರುದ್ಧವಾಗಿದೆ ಎಂದರು.
ಪ್ರಧಾನ ಮಂತ್ರಿಯವರು "ಇಸ್ಲಾಮಿಕ್ ಪರಂಪರೆ" ಎಂಬ ಸಮಾವೇಶದಲ್ಲಿ ಭಾಗವಹಿಸಿ, "ಪ್ರತಿ ಧರ್ಮವು ಮಾನವ ಮೌಲ್ಯಗಳನ್ನು ಉತ್ತೇಜಿಸುತ್ತದೆ" ಎಂದು ತಿಳಿಸಿದ್ದಾರೆ. ಈ ಸಮಾರಂಭದಲ್ಲಿ ಜೋರ್ಡಾನ್ನ ರಾಜ ಅಬ್ದುಲ್ಲಾ II ಉಪಸ್ಥಿತರಿದ್ದರು.
ಮೋದಿ ಅವರು "ಭಾರತವು ವಿಶ್ವದ ಎಲ್ಲಾ ಪ್ರಮುಖ ಧರ್ಮಗಳ ತೊಟ್ಟಿಲು" ಎಂದು ಬಣ್ಣಿಸಿದರು.
ಮೋದಿಯವರ ಪ್ರಕಾರ, "ಭಾರತೀಯ ಪ್ರಜಾಪ್ರಭುತ್ವವು ಹಳೆಯ ಬಹುಸಂಸ್ಕೃತಿಯ ಆಚರಣೆಯನ್ನು ಹೊಂದಿದೆ, ಎಲ್ಲ ನಂಬಿಕೆಗಳು ಮಾನವ ಮೌಲ್ಯಗಳನ್ನು ಪ್ರೋತ್ಸಾಹಿಸುತ್ತವೆ. ಆದ್ದರಿಂದ, ನಮ್ಮ ಯುವಕರು ತಮ್ಮನ್ನು ತಾವು ಇಸ್ಲಾಂ ಧರ್ಮದ ಮಾನವೀಯ ಅಂಶಗಳೊಂದಿಗೆ ಸಂಯೋಜಿಸಬೇಕು ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು" ಎಂದು ಅವರು ಹೇಳಿದರು.
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.