ಮುಸ್ಲಿಮರಿಗೆ ಭಾರತಕ್ಕಿಂತ ಉತ್ತಮ ದೇಶ ಇಲ್ಲ ಮತ್ತು ಹಿಂದೂಗಳಿಗಿಂತ ಉತ್ತಮ ಸ್ನೇಹಿತನಿಲ್ಲ - ಶಾನವಾಜ್

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image
ನವದೆಹಲಿ (ಪಿಟಿಐ):ನಿವ್ರತ್ತ ಉಪಾಧ್ಯಕ್ಷ ಹಮೀದ್ ಅನ್ಸಾರಿಯವರು "ದೇಶದ ಮುಸ್ಲಿಮರಲ್ಲಿ ಅಹಿತಕರ ಭಾವನೆ, ಅನಾರೋಗ್ಯದ ಭಾವನೆ ಬೆಳೆಯುತ್ತಿದೆ" ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ರಾಜ್ಯಸಭೆ ಟಿವಿಗೆ ಸಂದರ್ಶನವೊಂದರಲ್ಲಿ ಅನ್ಸಾರಿ "ಗೋ ರಕ್ಷಕರಿಂದ ನಡೆದ ಇತ್ತೀಚಿನ ಗಲಭೆಗಳಿಂದಾಗಿ ದೇಶದ ಮುಸ್ಲಿಂ ಸಮುದಾಯ ಆತಂಕ ವ್ಯಕ್ತಪಡಿಸುತ್ತಿದ್ದಾರೆ" ಎಂದು ಹೇಳಿದ್ದರು.

ಆದರೆ ಬಿಜೆಪಿ ನಾಯಕರು ಖಾರವಾಗಿ ಪ್ರತಿಕ್ರಿಯಿಸುತ್ತಾ ಹೇಳಿಕೆಗಳನ್ನು ನೀಡಿದರು. ಬಿಜೆಪಿಯ ಶಾನವಾಜ್ "ಮುಸ್ಲಿಮರಿಗೆ ಭಾರತಕ್ಕಿಂತ ಉತ್ತಮ ದೇಶ ಇಲ್ಲ ಮತ್ತು ಹಿಂದೂಗಳಿಗಿಂತ ಉತ್ತಮ ಸ್ನೇಹಿತನಿಲ್ಲ" ಎಂದಿದ್ದಾರೆ.

ಅನ್ಸಾರಿಯವರ ಹೇಳಿಕೆಗೆ ಇನ್ನೊಬ್ಬ ಬಿಜಿಪಿ ಮುಖಂಡ ಪ್ರೀತಿ ಗಾಂಧಿ, "ಹಿಂದೂಗಳು ಬಹುಸಂಖ್ಯಾತರಾಗಿರುವ ಭಾರತದಲ್ಲಿ ಅನ್ಸಾರಿಯವರನ್ನು ಉಪಾಧ್ಯಕ್ಷ ಹುದ್ದೆಯಲ್ಲಿ ೧೦ ವರ್ಷಕೂರಿಸಿದ್ದರು ಅಹಿತಕರ ಭಾವನೆ ಇದೆ ಎನ್ನುತ್ತಿದ್ದಾರೆ." ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.