ಸಿದ್ದರಾಮಯ್ಯನವರೇ ಇದು ವಾಂಗೀಬಾತ್ ಅಲ್ಲಾ ಡೋಂಗಿ ಬಾತ್!! ಇಂದಿರಾ ಕ್ಯಾಂಟೀನ್ ಗೋಲ್ ಮಾಲ್

og:image

ನಿನ್ನೆ ಬೆಳಿಗ್ಗೆ, ಪಬ್ಲಿಕ್ ಟಿ.ವಿ ಯವರು ಎಲ್ಲರಂತೆ ಹೊದ್ದುಕೊಂಡು ಮಲಗಿದ್ದರೆ, ನಾವು ನೀವೂ ಎಲ್ಲರೂ, ಸಿದ್ದರಾಮಯ್ಯನವರ ಇಂದಿರಾ ಕ್ಯಾಂಟೀನ್ ಬಗ್ಗೆ ಪುಟಗಟ್ಟಲೆ ಬರೆದು ಹೊಗಳಿ ಅಟ್ಟಕ್ಕೇರಿಸಿರುತ್ತಿದ್ದೆವೇನೋ! ಯಾಕಂದರೆ ವಿಷಯವೇ ಅಂತಹುದು, ಬಡವರಿಗೆ ಊಟ ಕೊಡೊ ಉದ್ದೇಶವೇನೋ ಒಳ್ಳೆಯದು, ಈ ವಿಷಯದ ಬಗ್ಗೆ ನಾವು ನೀವು ಎನಾದರೂ ಬರೆದರೆ ನಾವು ಭಕ್ರರೆಂದು ಬ್ರಾಂಡ್ ಆಗ್ತೀವೇನೋ ಎಂಬ ಭಯ!

ಹೌದು, ಜನ ಸಾಮನ್ಯರನ್ನು ಬಿಡಿ, ಇಂಜಿನಿಯರಿಂಗ್ ಮುಗಿಸಿ ಐ.ಟಿ ಕೆಲಸಮಾಡುವ ಪಧವೀದರರೂ ಇಂದಿರಾ ಕ್ಯಾಂಟೀನ್ ಅನ್ನು ಹೊಗಳಿದ್ದೇ ಹೊಗಳಿದ್ದು. ಸಿದ್ದರಾಮಯ್ಯನವರು ಸ್ತಂತ ಜೇಬಿನಿಂದ ದುಡ್ಡು ಖರ್ಚುಮಾಡಿ ಊಟ ಹಾಕಿಸಿದಷ್ಟೇ ಖುಶಿಪಟ್ಟರು. ಆದರೆ ವಿಷಯ ಬೇರೆನೆ ಇದೆ.
"ಇಂದಿರಾ ಕ್ಯಾಂಟೀನ್" ಎಂಬ ಹೆಸರು ಕೇಳಿ ಇದು ಕಾಂಗ್ರೆಸ್ ಯೋಜನೆ ಎಂದು ಮೋಸಹೋಗಬೇಡಿ, ಇದು ಕರ್ನಾಟಕ ಸರ್ಕಾರದ ಯೋಜನೆ, ಸರ್ಕಾರಕ್ಕೆ ದುಡ್ಡು ಎಲ್ಲಿಂದ ಬಂತು ಎಂದರೆ, ಇದೇ ನಾವು ಕಟ್ಟಿದ ಟಾಕ್ಸ್. ಅಯ್ಯೋ ಪರ್ವಾಗಿಲ್ಲ ಸಾರ್, ಬಡವರಿಗೆ ಅಲ್ವ, ದುಡ್ಡು ಹಾಗದ್ರೂ ಯೂಸ್ ಆಗ್ಲಿ ಅಂತ ಅಂದುಕೊಂಡಿದ್ದೀರ??? ಅದರೆ ನಿಜ ಬೇರೆನೆ ಇದೆ.
ದಿನಕ್ಕೆ ನೂರಾರು ಇಂದಿರಾ ಕ್ಯಾಂಟೀನ್ ಗಳಲ್ಲಿ ಸಾವಿರಾರು ಜನರಿಗೆ ಕಡಿಮೆ ಬೆಲೆಗೆ ಅಡುಗೆ ಮಾಡಬೇಕಾದರೆ ಅದಕ್ಕೆ ಸರ್ಕಾರ ನಮ್ಮ ಟಾಕ್ಸ್ ಹಣದಿಂದ ಇಂತಿಷ್ಟು ದುಡ್ಡು ಉಪಯೋಗಿಸುತ್ತದೆ. ಸರ್ಕಾರ ಭರವಸೆ ನೀಡಿದಂತೆ ಊಟ ತಯಾರು ಮಾಡುವ ಫ್ಯಾಕ್ಟರಿಗಳಲ್ಲಿ ಊಟ ತಯಾರಿಸಲು ಅಷ್ಟು ದುಡ್ಡು ಬೇಕು. ಆದರೆ ನಿಜವಾಗಿ ಆಗುತ್ತಿರುವುದೇನು??? ಸರ್ಕಾರದಿಂದ ನೇಮಿಸಲ್ಪಟ್ಟ ಕಾಂಟ್ರಕ್ಟರ್ಗಳು ಎಲ್ಲೆಂದರಲ್ಲಿ ಊಟ ತಯಾರಿಸಿ ಜನರಿಂದ ದುಡ್ಡು ಪಡೆದು ಊಟ ಮಾಡುತ್ತಿದ್ದಾರೆ. ಅಂದರೆ, ತಾವು ಕೊಡುವ ಬೆಲೆಗೆ ಸರಿಯಾದ ನ್ಯಾಯ ಸಿಗುತ್ತಿದೆಯೇ ಎಂಬುದು ಈಗಿನ ಪ್ರಶ್ನೆ.

ಪಬ್ಲಿಕ್ ಟಿ.ವಿಯವರು ರೆಡಿ ಮಾಡಿರುವ ಈ ವೀಡಿಯೋ ನೊಡಿ.


English Summary:Marriage food supplier supplies food to Indira Canteen, Indira Canteen Scam
Tags :
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ