ಕೇರಳದಲ್ಲಿ ಮತ್ತೊಮ್ಮೆ "ಲವ್ ಜಿಹಾದ್", ತನಿಖೆ ಎನ್ಐಎಗೆ - ಸುಪ್ರೀಂ ಕೋರ್ಟ್

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image

ಕೇರಳದ ವಿವಾದಿತ "ಲವ್ ಜಿಹಾದ್" ವಿವಾಹಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎನ್ಐಎಗೆ ಇಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ವಾದ ಮಂಡಿಸಿದ ಕೇಂದ್ರೀಯ ಸಂಸ್ಥೆ, ಇದು ಮೊದಲನೇ ಪ್ರಕರಣವೇನಲ್ಲ, ಪ್ರೇಮದ ನೆಪದಲ್ಲಿ ಹಿಂದೂ ಮಹಿಳೆಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವ ಯೋಜನೆಯೇ ಇದೆ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹ್ರವರ ನೇತೃತ್ವದ ಪೀಠವು, ವಿಚಾರಣೆ ನ್ಯಾಯಯುತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ತನಿಖೆಗೆ ಮೇಲ್ವಿಚಾರಣೆಗೆ ನಿವೃತ್ತ ಎಸ್ಸಿ ನ್ಯಾಯಾಧೀಶ ನ್ಯಾಯಮೂರ್ತಿ, ಆರ್.ವಿ. ರವೀಂದ್ರನ್ ಇವರುಗಳನ್ನು ನೇಮಿಸಿದೆ. ಕೇರಳ ಮೂಲದ ಶಾಫಿನ್ ಜಹಾನ್ ಸಲ್ಲಿಸಿದ ಅರ್ಜಿಯ ಮೇರೆಗೆ ಬೆಂಚ್ ಆದೇಶ ಹೊರಡಿಸಿದೆ. ಶಾಫಿನ್ ಜಹಾನ್ ಹಿಂದೂ ಮಹಿಳೆಯೊಂದಿಗೆ ಮದುವೆಯಾಗಿದ್ದು, ಕೇರಳ ಹೈಕೋರ್ಟ್ ಇದನ್ನು "ಲವ್ ಜಿಹಾದ್" ಪ್ರಕರಣವೆಂದು ಅನುಮಾನಿಸಿದೆ.

ಹಿಂದೂ ಸಂಘಟನೆಗಳ ಪ್ರಕಾರ, ಲವ್ ಜಿಹಾದ್ ಎನ್ನುವುದು ಹಿಂದೂ ಮಹಿಳೆಯರನ್ನು ಸೆಡಕ್ಷನ್, ಮದುವೆ ಆಮಿಷ, ಹಣ ಅಥವಾ ಬೆದರಿಕೆ ಮೂಲಕ ಧರ್ಮ ಪರಿವರ್ತಿಸುವ ಇಸ್ಲಾಮಿ ತಂತ್ರ. ಶಾಫಿನ್ ಜಹಾನ್ ವಿವಾಹವನ್ನು ನ್ಯಾಯಯುತವಾಗಿಲ್ಲ ಎಂದು ತಿರಸ್ಕರಿಸಿದ ಹೈಕೋರ್ಟ್ನ ಡಿವಿಷನ್ ಪೀಠವು, "ಲವ್ ಜಿಹಾದ್" ಮಾಡಲು ವ್ಯವಸ್ತಿತ ತಂಡ ಇದೆಯೇ ಮತ್ತು ಐಸಿಸ್ ಗಾಗಿ ಯುವಕ-ಯುವತಿಯರನ್ನು ನೇಮಕ ಮಾಡುವಲ್ಲಿ ಅವರ ಶಂಕಿತ ಪಾತ್ರವಿದೆಯೇ ಎಂದು ಕಂಡುಹಿಡಿಯಲು ಉನ್ನತ-ಮಟ್ಟದ ತನಿಖೆ ಅಗತ್ಯವಿದೆ ಎಂದು ಗಂಭೀರ ಅವಲೋಕನ ಮಾಡಿದರು.
ಹೈಕೋರ್ಟ್ ಆದೇಶವನ್ನು ತಿರಸ್ಕರಿಸಬೇಕೆಂದು ಜಹಾನ್ ಬಯಸಿದ್ದಾರೆ. ಮಹಿಳೆಯನ್ನು ಸಂದರ್ಶಿಸಲು ಜಹಾನ್ ಅವರ ವಕೀಲ ಕಪಿಲ್ ಸಿಬಲ್ ಅವರ ಮನವಿಯನ್ನು ಪರಿಗಣಿಸಲು ಅಗ್ರ ನ್ಯಾಯಾಲಯ ನಿರಾಕರಿಸಿತು. ಹಿರಿಯ ವಕೀಲರು, ಮಹಿಳೆ ವೈದ್ಯರಾಗಿದ್ದು ಮತ್ತು ಮದುವೆಯ ವಯಸ್ಸಾಗಿದೆ, ಅವರನ್ನು ಲಾಕ್ ಮಾಡಿ ಇರಿಸಲಾಗುವುದಿಲ್ಲ ಎಂದು ವಾದಿಸಿದರು.

ಪ್ರೀತಿಯಂತಹ ವಿಷಯಗಳು ಜನರನ್ನು ಏನನ್ನೂ ಮಾಡಲು ಪ್ರೇರೇಪಿಸುತ್ತವೆ. ನಾವು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮೊದಲು ಎಲ್ಲಾ ಕಡೆಗಳಿಂದ ತನಿಖೆ ಮಾಡಬೇಕು ಎಂದು ಮುಖ್ಯ ನ್ಯಾಯಾಧೀಶ ಖಹಾರ್, ಸಿಬಲ್ ಗೆ ತಿಳಿಸಿದರು. ಅಂತಿಮ ನ್ಯಾಯ ನೀಡುವ ಮುಂಚೆಯೇ ಮಹಿಳೆಯೊಂದಿಗೆ ಮಾತಾಡಬಹುದೆಂದು ಬೆಂಚ್ ಅವರಿಗೆ ಭರವಸೆ ನೀಡಿದರು. ಇಂತಹ ಪ್ರಕರಣ ಮೊದಲನೆಯದಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣಿಂದರ್ ಸಿಂಗ್ ತಿಳಿಸಿದರು. ನ್ಯಾಯಾಲಯದ ಆದೇಶದ ಆಧಾರದ ಮೇಲೆ ನಾವು ಕೆಲವು ವಿಷಯಗಳನ್ನು ಪರಿಗಣಿಸಿದ್ದೇವೆ ಎಂದು ಸಿಂಗ್ ಹೇಳಿದರು.

English Summary: Kerala Marriage Love Jehad Muslim man marries Hindu Girl, Case of Love Jihad imposed on him. Court ordered investigation.
Tags :Love Jihad, Case, Kerala, Marriage, Court, Muslim, Hindu, Conversion
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.