ಬ್ಲಾಕ್ ಮೇಲ್ ಅರೋಪಿ "ಸೆಕ್ಸ್ ಸುಲ್ತಾನ್" ಬಂಧನ

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image
ಢಾಕಾ: ಬಾಂಗ್ಲಾದೇಶದ ಪೊಲೀಸರು ಸ್ವಯಂ ಘೋಷಿತ "ಸೆಕ್ಸ್ ಸುಲ್ತಾನ್" ಎಂಬ ಕುಖ್ಯಾತಿಪಡೆದ,  ಡಜನ್ಗಟ್ಟಲೆ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳಗಳನ್ನು ನೀಡಿ ಅದನ್ನು ಚಿತ್ರೀಕರಿಸಿ  ಬ್ಲ್ಯಾಕ್ಮೇಲ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.

ಠಾಕಾದಲ್ಲಿ ಫೂದ್ ಬಿನ್ ಸುಲ್ತಾನ್ ಅವರ ಮನೆ ಮೇಲೆ ಬುಧವಾರ ಪೊಲೀಸರು ದಾಳಿ ನಡೆಸಿದರು. ಅಲ್ಲಿ ಅವರು ಲ್ಯಾಪ್ಟಾಪ್, ಮೆಥಾಂಫಿಟಾಮೈನ್ ಮಾತ್ರೆಗಳು ಮತ್ತು ಅಶ್ಲೀಲ ವಿಡಿಯೋಗಳನ್ನು ವಶಪಡಿಸಿಕೊಂಡರು.

 ಆರೋಪಿ ಸುಲ್ತಾನ್, ಆನ್ಲೈನ್ ಮೂಲಕ ಗ್ರಾಹಕರನ್ನು ಭೇಟಿಯಾಗಿ ತನ್ನ ಅಪಾರ್ಟ್ಮೆಂಟ್ ನಲ್ಲಿ ಲೈಂಗಿಕವಾಗಿ ಬಳಸುತ್ತಿದ್ದನು ಎಂದು ಬಾಂಗ್ಲಾದೇಶದ ಗಣ್ಯ ಪೊಲೀಸ್ ಘಟಕ ವಕ್ತಾರರು ಹೇಳಿದರು.

"ಬಹುಪಾಲು ವಿವಾಹಿತ ಮಹಿಳೆಯರ ಜೊತೆ ಲೈಂಗಿಕ  ಕ್ಷಣಗಳನ್ನು ಆತ  ಚಿತ್ರೀಕರಿಸಿ ಮತ್ತು ನಂತರ ಆ ಸಂತ್ರಸ್ತರಿಗೆ, ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನು. ನಾವು ಅವನ  ಲ್ಯಾಪ್ಟಾಪ್ನಲ್ಲಿ ಸುಮಾರು 150  ಬಲಿಪಶುಗಳ ವೀಡಿಯೊಗಳನ್ನು ಕಂಡುಕೊಂಡಿದ್ದೇವೆ" ಎಂದು ವಕ್ತಾರ ಇಶಿಯಾಕ್ಯೂ ಅಹ್ಮದ್ AFP ಗೆ ತಿಳಿಸಿದರು.


ವ್ರತ್ತಿಯಲ್ಲಿ ಸುಲ್ತಾನ್, ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದು, ಆನ್ ಲೈನ್ ನಲ್ಲಿ  ಅಸಭ್ಯ ಲೈವ್ ಸ್ಟ್ರೀಮಿಂಗ್ ವ್ಯಾಪಾರದ ಮೂಲಕ  "ಕಿರಿಯರನ್ನೂ ಒಳಗೊಂಡಂತೆ ಸಾವಿರಾರು ವೀಕ್ಷಕರನ್ನು ಸೆಳೆದಿದ್ದನು. ಸುಪರ್ ಹೀರೋ ಮುಖವಾಡ ಧರಿಸಿ ಆತ ನಡೆಸುವ ಸೆಕ್ಸ್ ವೀಡಿಯೋ ತುಂಬಾ ಕಿರಿಯರನ್ನು ಸೆಳೆಯುತ್ತಿತ್ತು.

"ನಾವು ಆತನನ್ನು ಬಂಧಿಸಿದ ಬಳಿಕ ಸುಲ್ತಾನ್, ತಾನು ಆ ವಿವಾಹೇತರ  ಸಂಬಂಧಗಳನ್ನು ಹೊಂದಿದ್ದು, ತಾನು ಲೈಂಗಿಕ ಸಂಭೋಗದ ಸುಲ್ತಾನ್ ಎಂದು ಹೇಳಿಕೊಂಡಿದ್ದಾನೆ" ಎಂದು ಅಹ್ಮದ್ ಹೇಳಿದ್ದಾರೆ.

"ಮಹಿಳೆಯರು ಎಲ್ಲಾ ತಿಳಿದುಕೊಂಡು, ಸ್ವಇಚ್ಛೆಯಿಂದ ಬಂದರು." ಎಂದು ಅವನು ಪೋಲಿಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾನೆ.