ಮಕ್ಕಳ ಎದುರೇ ಟೀಚರ್ ಗೆ ಬೆಂಕಿ - ಬೆಂಗಳೂರಲ್ಲಿ ಭಯಾನಕ ಘಟನೆ

og:image

ಬೆಂಗಳೂರು: ಬೆಂಗಳೂರಿನಿಂದ 55 ಕಿ.ಮೀ ದೂರದಲ್ಲಿರುವ ಮಾಗಡಿ ತಾಲೂಕಿನಲ್ಲಿನ ಶಂಬಯಾಯನಾಪಲ್ಯದಲ್ಲಿ, 50 ವರ್ಷ ವಯಸ್ಸಿನ ಸರ್ಕಾರಿ ಶಾಲಾ ಶಿಕ್ಷಕಿಯನ್ನು, ಮಧ್ಯಾಹ್ನ ತನ್ನ ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ, ಆಕೆಯ ಉದ್ಯಮಿ ಪಾರ್ಟ್ನರ್ ಆಕೆಯು ಮೇಲೆ ಕಿರೋಸೀನ್ ಸುರಿದು ಬೆಂಕಿ ಹಚ್ಚಿದ್ದಾನೆ. ವಿದ್ಯಾರ್ಥಿಗಳು ದಿಗಿಲುಗೊಂಡು ನೊಡುತ್ತಾ ಇದ್ದ ಹಾಗೆ ಈ ಘಟನೆ ನಡೆದಿದ್ದು, ಹಾಡುಹಗಲೇ ಕರ್ನಾಟಕದ ರಾಜಧಾನಿಯಲ್ಲಿ ಈ ಘಟನೆ ನಡೆದಿದೆ.

ಕೆ.ಜಿ. ಸುನಂದಾ ಎಂಬ ಮಹಿಳೆಯ ಮೇಲೆ ಈ ಧಾಳಿ ನಡೆದಿದ್ದು, 50 ಶೇಕಡ ಸುಟ್ಟಗಾಯಗಳಿಂದ ನರಳುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಭರ್ತಿ ಮಾಡಲಾಗಿದೆ. ಬಹಳವಾಗಿ ಸುಟ್ಟ ಗಾಯಗೊಳೊಂದಿಗೆ ಆಸ್ಪತ್ರೆ ಸೇರಿದ್ದಾರೆಂದು ವೈದ್ಯರು ಹೇಳಿದ್ದಾರೆ ಮತ್ತು ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ಆಪಾದಿತ ದಾಳಿಕೋರ, ರೇಣುಕಾರಾಧ್ಯನಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.

ಘಟನೆಯು ಸಂಭವಿಸಿದಾಗ ಸುನಂದ, 5ನೇ ತರಗತಿಯ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನವನ್ನು ಬೋಧಿಸುತ್ತಿದ್ದರು. "ಸುಮಾರು 2 ಗಂಟೆಗೆ, ಒಬ್ಬ ವ್ಯಕ್ತಿ ತರಗತಿಯೊಳಗೆ ಪ್ರವೇಶಿಸಿ ಶಿಕ್ಷಕನೊಡನೆ ಕೂಗಾಡುತ್ತಿದ್ದನು ಮತ್ತು ಸ್ವಲ್ಪ ಸಮಯದವರೆಗೆ ಅವರು ವಾದಿಸಿದರು, ಶಿಕ್ಷಕರು ಅವನನ್ನು ತರಗತಿಯ ಕೊಠಡಿಯನ್ನು ಬಿಟ್ಟು ಹೊರ ಹೋಗಲು ಕೇಳಿಕೊಂಡರು. ಆಗ ಅವನು ಬಾಟಲಿಯನ್ನು ತೆರೆದು ಅವರ ಮೇಲೆ ಕೆರೋಸಿನ್ ಸುರಿದರು. ನಾವು ಅಸಹಾಯಕರಾಗಿ ಕಿರುಚುತ್ತಿದ್ದೆವು." ಎಂದು ಒಬ್ಬ ವಿದ್ಯಾರ್ಥಿ ಹೇಳಿದನು.

ದಾಳಿಕೋರನು ಜಾಗ ಬಿಟ್ಟು ಹೋದಾಗ, ಭಯಭೀತರಾಗಿದ್ದ ವಿದ್ಯಾರ್ಥಿಗಳು ಶಿಕ್ಷಕರಿಗೆ ಸಹಾಯ ಪಡೆಯಲು ಕ್ಸಾಸ್ನಿಂದ ಹೊರಗೆ ಬಂದರು.

English Summary:Bangalore business partner pours kerosene and burns a teacher on broad day light
Tags :Teacher, Attempt to Murder, Day light attack, Karnataka
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ