5 ಸ್ಟಾರ್ ಹೋಟೆಲ್ನಲ್ಲಿ ಮಹಿಳೆಯ ಸೀರೆ ಎಳೆದ ಅಧಿಕಾರಿ - ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ರೆಕಾರ್ಡ್

og:image
ನವದೆಹಲಿ: ದೆಹಲಿಯಲ್ಲಿ ಪಂಚತಾರಾ ಹೊಟೇಲೊಂದರಲ್ಲಿ ಹೋಟೆಲ್ ಸಿಬ್ಬಂಧಿ, ಮಹಿಳಾ ಉದ್ಯೋಗಿಯೊಬ್ಬಳ ಸೀರೆ ಎಳೆದಿದ್ದು, ಲೈಂಗಿಕವಾಗಿ ಹಲ್ಲೆಮಾಡಿದ್ದು, ಆ ದ್ರಶ್ಯ ಸಿ.ಟಿ.ಟಿ.ವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಆಘಾತಕಾರಿ ದೃಶ್ಯಗಳನ್ನು 33 ವರ್ಷದ ಮಹಿಳೆ ಹಂಚಿಕೊಂಡಿದ್ದಾರೆ. ಆ ಮಹಿಳಾ ಉದ್ಯೋಗಿಯನ್ನು ಕಾರಣ ವಿವರಿಸದೆ ಕೆಲಸದಿಂದ ವಜಾ ಮಾಡಲಾಗಿದೆ. ಆಕೆಯ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯ ಜೊತೆ ಹೋಟೆಲ್ನ ಭದ್ರತಾ ವ್ಯವಸ್ಥಾಪಕನನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಈ ಘಟನೆಯು ಜುಲೈ 29 ರಂದು ದೆಹಲಿ ವಿಮಾನ ನಿಲ್ದಾಣದ ಬಳಿ ಹೋಟೆಲ್ನಲ್ಲಿ ನಡೆಯಿತು, ವೀಡಿಯೊದಲ್ಲಿ ಕಂಡುಬಂದತ್ತೆ, ಧಾಳಿನಡೆದಾಗ ಸಹಾಯಮಾಡಾದೆ ಕೊಠಡಿಯನ್ನು ಬಿಟ್ಟುಹೋದ ಸುಪೀರಿಯರ್ ಅಧಿಕಾರಿಯನ್ನೂ ಕೂಡಾ ಅಮಾನತು ಮಾಡಲಾಗಿದೆ.

ಆಕೆ ಮನೆಗೆ ತೆರಳಲು ಹೊರಟಾಗ, ಭದ್ರತಾ ವ್ಯವಸ್ಥಾಪಕರು ಮಹಿಳೆಯನ್ನು ಎರಡು ಬಾರಿ ತನ್ನ ಕಾರಿನಲ್ಲಿ ಎಳೆಯಲು ಪ್ರಯತ್ನಿಸಿದ ಎಂದು ಆರೋಪಿಸಿಲಾಗಿದೆ.

"ಅಂದು ನನ್ನ ಹುಟ್ಟುಹಬ್ಬವಾಗಿತ್ತು, ಅವನು ನನ್ನನ್ನು ತನ್ನ ಕ್ಯಾಬಿನ್ಗೆ ಕರೆದೊಯ್ದನು, ತನ್ನ ಕ್ರೆಡಿಟ್ ಕಾರ್ಡ್ ತೆಗೆದು ನನಗೆ ಯಾವ ಉಡುಗೊರೆ ಬೇಕೆಂದು ಕೇಳಿದ. ಆಗ ಬಾಸ್ ನನಗೆ ಕುಳಿತುಕೊಳ್ಳಲು ಹೇಳಿದನು, ನಾನು ಕುಳಿತುಕೊಳ್ಳದೆ ಇದ್ದಾಗ, ಅವನು ನನ್ನನ್ನು ತನ್ನ ಕಡೆಗೆ ಎಳೆದನು ಮತ್ತು ನನ್ನ ಸೀರೆಯನ್ನು ತೆಗೆದು ಹಾಕಲು ಪ್ರಯತ್ನಿಸಿದನು. ಅಲ್ಲೇ ಇದ್ದ ಇನ್ನೊಬ್ಬ ಸಿಬ್ಬಂಧಿಯನ್ನು ಕೊಠಡಿಯಿಂದ ಹೊರಗೆ ಹೋಗಲು ಆದೇಶಿಸಿದನು" ಎಂದು ಸಂತ್ರಸ್ಥೆ ಮಾಧ್ಯಮದ ಮುಂದೆ ತನ್ನ ನೋವು ತೋಡಿಕೊಂಡಳು. ಅದೇ ರಾತ್ರಿ, ಅವರು ಈ ಘಟನೆಯನ್ನು ಎಚ್ ಆರ್ ಇಲಾಖೆಗೆ ವರದಿ ಮಾಡಿದ್ದಾರೆ ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ಆರೋಪಿಸುತ್ತಾರೆ. ಆಕೆಯ ಗಂಡನ ಸಲಹೆಯ ಮೇರೆಗೆ ಅವರು ಆಗಸ್ಟ್ 1 ರಂದು ವಿಮಾನ ನಿಲ್ದಾಣ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ಸಲ್ಲಿಸಿದರು.

ಸಿಸಿಟಿವಿಯಲ್ಲಿ ರೆಕಾರ್ಡ್ ಆದ ವಿಡಿಯೋ ಇಲ್ಲಿದೆ ನೋಡಿ.

English Summary: A Lady was attacked at Delhi Five Star Hotel and pulled her Saree,. Incident recorded in CCTV.
NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕಾಮೆಂಟ್‌ಗಳಿಲ್ಲ